top of page

ಪಿಯು ಮರುಮೌಲ್ಯಮಾಪನ 
ವಿದ್ಯೋದಯ ಪದವಿ ಪೂರ್ವ ಕಾಲೇಜಿಗೆ ಮತ್ತೊಂದು ರ್‍ಯಾಂಕ್

ಉಡುಪಿ: ವಿದ್ಯೋದಯ ಟ್ರಸ್ಟ್ (ರಿ.)ನ ಅಂಗ ಸಂಸ್ಥೆ ವಿದ್ಯೋದಯ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಈಗಾಗಲೇ 14 ರ್‍ಯಾಂಕ್ ಪಡೆದಿದ್ದು; ಇದೀಗ ಮರುಮೌಲ್ಯಮಾಪನದಲ್ಲಿ ವಿಜ್ಞಾನ ವಿಭಾಗದ ಅದಿತಿ ಎಸ್. ಕೋಟಿಯಾನ್  ಇಂಗ್ಲೀಷ್ ವಿಷಯದಲ್ಲಿ 3 ಅಂಕಗಳನ್ನು ಮತ್ತು ಜೀವಶಾಸ್ತ್ರದಲ್ಲಿ  2 ಅಂಕಗಳನ್ನು, ಹೆಚ್ಚುವರಿಯಾಗಿ ಪಡೆದು 588 ಅಂಕಗಳೊಂದಿಗೆ ರಾಜ್ಯದಲ್ಲಿ 9ನೇ ರ್‍ಯಾಂಕ್  ತಮ್ಮದಾಗಿಸಿಕೊಂಡಿದ್ದಾರೆ. ಹೀಗಾಗಿ 2023 ಪಿಯುಸಿ ಫಲಿತಾಂಶದಲ್ಲಿ ವಿದ್ಯೋದಯ ಪದವಿ ಪೂರ್ವ ಕಾಲೇಜು ಒಟ್ಟು 15 ರ್‍ಯಾಂಕ್ ಪಡೆದುಕೊಂಡಂತಾಗಿದೆ ಎಂದು ಕಾಲೇಜು ಪ್ರಾಂಶುಪಾಲರಾದ ಶ್ರೀ ಸಂದೀಪ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು. ಸಾಧಕ ವಿದ್ಯಾರ್ಥಿಯನ್ನು ಕಾಲೇಜು ಆಡಳಿತ ಮಂಡಳಿ ಬೋಧಕ - ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

 

ಪಿಯು ಮರುಮೌಲ್ಯಮಾಪನ 
ವಿದ್ಯೋದಯ ಪದವಿ ಪೂರ್ವ ಕಾಲೇಜಿಗೆ ಮತ್ತೊಂದು ರ್‍ಯಾಂಕ್

ಉಡುಪಿ: ವಿದ್ಯೋದಯ ಟ್ರಸ್ಟ್ (ರಿ.)ನ ಅಂಗ ಸಂಸ್ಥೆ ವಿದ್ಯೋದಯ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಈಗಾಗಲೇ 13 ರ್‍ಯಾಂಕ್ ಪಡೆದಿದ್ದು; ಇದೀಗ ಮರುಮೌಲ್ಯಮಾಪನದಲ್ಲಿ ವಿಜ್ಞಾನ ವಿಭಾಗದ ಪಲ್ಲವಿ ಪೈ ಇಂಗ್ಲೀಷ್ ವಿಷಯದಲ್ಲಿ 3 ಅಂಕಗಳನ್ನು ಹೆಚ್ಚುವರಿಯಾಗಿ ಪಡೆದು 589 ಅಂಕಗಳೊಂದಿಗೆ ರಾಜ್ಯದಲ್ಲಿ 8ನೇ ರ್‍ಯಾಂಕ್  ತಮ್ಮದಾಗಿಸಿಕೊಂಡಿದ್ದಾರೆ. ಹೀಗಾಗಿ 2023 ಪಿಯುಸಿ ಫಲಿತಾಂಶದಲ್ಲಿ ವಿದ್ಯೋದಯ ಪದವಿ ಪೂರ್ವ ಕಾಲೇಜು ಒಟ್ಟು 14 ರ್‍ಯಾಂಕ್ ಪಡೆದುಕೊಂಡಂತಾಗಿದೆ ಎಂದು ಕಾಲೇಜು ಪ್ರಾಂಶುಪಾಲರಾದ ಶ್ರೀ ಸಂದೀಪ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು. ಸಾಧಕ ವಿದ್ಯಾರ್ಥಿಯನ್ನು ಕಾಲೇಜು ಆಡಳಿತ ಮಂಡಳಿ ಬೋಧಕ - ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

 

ಪಿ.ಯು.ಸಿ. 2023 : ಫಲಿತಾಂಶ 100% 
ರಾಜ್ಯ ಮಟ್ಟದ 13 ರ್‍ಯಾಂಕ್‌ಗಳು

ಉಡುಪಿಯ ವಿದ್ಯೋದಯ ಟ್ರಸ್ಟ್ (ರಿ.) ನ ಅಂಗಸಂಸ್ಥೆಯಾದ ವಿದ್ಯೋದಯ ಪದವಿಪೂರ್ವ ಕಾಲೇಜು 2022-23 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ದಾಖಲಿಸಿದೆ. 

ಈ ಬಾರಿ ವಿಜ್ಞಾನ ವಿಭಾಗದಲ್ಲಿ 100% ಫಲಿತಾಂಶ ದಾಖಲಾಗಿದ್ದು, ಈ ವರುಷ 311 ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದು; 241 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 69 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ 1 ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 

ವಾಣಿಜ್ಯ ವಿಭಾಗದಲ್ಲಿ 100% ಫಲಿತಾಂಶ ದಾಖಲಾಗಿದ್ದು, ಈ ವರುಷ 94 ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದು; 59 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 35 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ 8 ರಾಜ್ಯ ಮಟ್ಟದ ರ್‍ಯಾಂಕಗಳು:
ಸ್ರಜಾ ಎಚ್. ಹೆಗ್ಡೆ 591 ಅಂಕಗಳೊಂದಿಗೆ 6ನೇ ರ್‍ಯಾಂಕ್, ಜೆರೋಹಮ್ ಲಾಯ್ಡ್ ಮಾಬೆನ್ 590 ಅಂಕಗಳು
7ನೇ ರ್‍ಯಾಂಕ್, ಸುಹಾನಿ ಎಸ್. ಗಾಂವ್ಕರ್ ಮತ್ತು ರಿಯಾ ಪೈ 589 ಅಂಕಗಳು 8 ನೇ ರ್‍ಯಾಂಕ್, ದಿಯಾ ಎಸ್. ಶೆಟ್ಟಿ 588 ಅಂಕಗಳೊಂದಿಗೆ 9ನೇ ರ್‍ಯಾಂಕ್ ಮತ್ತು 587 ಅಂಕಗಳೊಂದಿಗೆ 10ನೇ ರ್‍ಯಾಂಕ್‌ನ್ನು ರೋಶನ್ ರತ್ನಾಕರ ಪೂಜಾರಿ, ಶ್ರೇಯ ಮತ್ತು ಸಿಂಚನಾ ಸಿ. ಪೂಜಾರಿ ಗಳಿಸಿರುತ್ತಾರೆ.

ವಾಣಿಜ್ಯ ವಿಭಾಗದಲ್ಲಿ 5 ರಾಜ್ಯ ಮಟ್ಟದ ರ್‍ಯಾಂಕಗಳು:
ರಮ್ಯಾ ಆರ್. ಭಟ್ 593 ಅಂಕಗಳೊಂದಿಗೆ 5ನೇ ರ್‍ಯಾಂಕ್, ಮೈಥಿಲಿ 591 ಅಂಕಗಳೊಂದಿಗೆ 7ನೇ ರ್‍ಯಾಂಕ್, ಹನ್ಫಾ ಅಸ್ಲಾಂ ಬೆಯಜಿದ್ 590 ಅಂಕಗಳು 8ನೇ ರ್‍ಯಾಂಕ್, ನಿಮಿತ್ ವೈ ಸುವರ್ಣ 589 ಅಂಕಗಳು 9ನೇ ರ್‍ಯಾಂಕ್, 588 ಅಂಕಗಳೊಂದಿಗೆ 10ನೇ ರ್‍ಯಾಂಕ್ ಸುಪ್ರೀತಾ ಗಳಿಸಿರುತ್ತಾರೆ.

 

ಪಿಯು ಮರುಮೌಲ್ಯಮಾಪನ 
ವಿದ್ಯೋದಯ ಪದವಿ ಪೂರ್ವ ಕಾಲೇಜಿಗೆ ಮತ್ತೊಂದು ರ್‍ಯಾಂಕ್

ಉಡುಪಿ: ವಿದ್ಯೋದಯ ಟ್ರಸ್ಟ್ (ರಿ.)ನ ಅಂಗ ಸಂಸ್ಥೆ ವಿದ್ಯೋದಯ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಈಗಾಗಲೇ 17 ರ್‍ಯಾಂಕ್‌ಗಳನ್ನು ಪಡೆದಿದ್ದು; ಇದೀಗ ಮರುಮೌಲ್ಯಮಾಪನದಲ್ಲಿ ವಾಣಿಜ್ಯ ವಿಭಾಗದ ಚಿರಾಗ್ ವ್ಯವಹಾರ ಅಧ್ಯಯನ ವಿಷಯದಲ್ಲಿ 9 ಅಂಕಗಳನ್ನು ಹೆಚ್ಚುವರಿಯಾಗಿ ಪಡೆದು 588 ಅಂಕಗಳೊಂದಿಗೆ ರಾಜ್ಯದಲ್ಲಿ 9ನೇ ರ್‍ಯಾಂಕ್ ತಮ್ಮದಾಗಿಸಿಕೊಂಡಿದ್ದಾರೆ. ಹೀಗಾಗಿ 2022 ಪಿಯುಸಿ ಫಲಿತಾಂಶದಲ್ಲಿ ವಿದ್ಯೋದಯ ಪದವಿ ಪೂರ್ವ ಕಾಲೇಜು ಒಟ್ಟು 18 ರ್‍ಯಾಂಕ್‌ಗಳನ್ನು ಪಡೆದುಕೊಂಡಂತಾಗಿದೆ ಎಂದು ಕಾಲೇಜು ಪ್ರಾಂಶುಪಾಲರಾದ ಶ್ರೀ ಸಂದೀಪ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು. ಸಾಧಕ ವಿದ್ಯಾರ್ಥಿಯನ್ನು ಕಾಲೇಜು ಆಡಳಿತ ಮಂಡಳಿ ಬೋಧಕ - ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

 

ಪಿ.ಯು.ಸಿ. 2022 : ರಾಜ್ಯ ಮಟ್ಟದ 17 ರ್‍ಯಾಂಕ್‌ಗಳು

WA_OmkarPrabhu_.jpg

ಉಡುಪಿಯ ವಿದ್ಯೋದಯ ಟ್ರಸ್ಟ್ (ರಿ.) ನ ಅಂಗಸಂಸ್ಥೆಯಾದ ವಿದ್ಯೋದಯ ಪದವಿಪೂರ್ವ ಕಾಲೇಜು 2021-22 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿದೆ.

 

ಈ ಬಾರಿ ವಿಜ್ಞಾನ ವಿಭಾಗದಲ್ಲಿ 322 ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದು; 214 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 106 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ 2 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

 

ವಿಜ್ಞಾನ ವಿಭಾಗದಲ್ಲಿ 12 ರಾಜ್ಯ ಮಟ್ಟದ ರ್‍ಯಾಂಕ್ ಗಳು:

ವಿಜ್ಞಾನ ವಿಭಾಗದ ವಿದ್ಯಾರ್ಥಿ ಓಂಕಾರ್ ಪ್ರಭು ಹಿಂದಿಯಲ್ಲಿ 100, ಇಂಗ್ಲೀಷ್ 98, ಭೌತಶಾಸ್ತ್ರ 100, ರಸಾಯನ ಶಾಸ್ತ್ರ 98, ಗಣಿತ 100 ಮತ್ತು ಗಣಕವಿಜ್ಞಾನದಲ್ಲಿ 100 ಗಳಿಸುವ ಮೂಲಕ ಒಟ್ಟು 596 ಗಳೊಂದಿಗೆ ರಾಜ್ಯ ಮಟ್ಟದಲ್ಲಿ 3ನೇ ರ್‍ಯಾಂಕ್ ಗಳಿಸಿದ್ದಾನೆ.

 

ನಿಯತಾ 594 ಅಂಕಗಳೊಂದಿಗೆ 5 ನೇ ರ್‍ಯಾಂಕ್, ಲಕ್ಷ್ಮೀ ಪಿ. 592 ಅಂಕಗಳೊಂದಿಗೆ 7ನೇ ರ್‍ಯಾಂಕ್, ಪ್ರಣಮ್ಯ ಆಚಾರ್ಯ, ಕೆ.ಎಸ್. ನಿಹಾರಿಕಾ ನವ್ಯಾ ದಿನೇಶ್ ಶೆಟ್ಟಿ 591 ಅಂಕಗಳೊಂದಿಗೆ 8ನೇ ರ್‍ಯಾಂಕ್, ಪಾವನ್ ಎ. ಶೆಟ್ಟಿ, ಈಶಾ ಕುಂದರ್, ಅಮರನಾಥ ಭಟ್ ಬಿ. ಮತ್ತು ಚಿನ್ಮಯ ಅಡಿಗ 590 ಅಂಕಗಳೊಂದಿಗೆ 9 ನೇ ರ್‍ಯಾಂಕ್ ಮತ್ತು ಅವನಿ ಹಾಗೂ ಜಾಗೃತಿ ಚಂದ್ರಶೇಖರ್ 589 ಅಂಕಗಳೊಂದಿಗೆ 10ನೇ ರ್‍ಯಾಂಕ್ ಪಡೆದಿರುತ್ತಾರೆ.

 

ವಾಣಿಜ್ಯ ವಿಭಾಗದಲ್ಲಿ 98.87% ಫಲಿತಾಂಶ ದಾಖಲಾಗಿದ್ದು, ಈ ವರುಷ 177 ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದು; 88 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 80 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 7 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

 

ವಾಣಿಜ್ಯ ವಿಭಾಗದಲ್ಲಿ 5 ರಾಜ್ಯ ಮಟ್ಟದ ರ್‍ಯಾಂಕ್‌ಗಳು:

ಮೇಘನಾ ಮೆಂಡನ್ 591 ಅಂಕಗಳೊಂದಿಗೆ 6 ನೇ ರ್‍ಯಾಂಕ್, ಹಿರಲ್ ಸುಂದರ್ 590 ಅಂಕಗಳೊಂದಿಗೆ 7ನೇ ರ್‍ಯಾಂಕ್, ದರ್ಶನ್ ಆರ್. ಶೆಟ್ಟಿ ಮತ್ತು ಲರಿಸ್ಸಾ ಹೆಜಲ್ ನಜರೆತ್ 589 ಅಂಕಗಳೊಂದಿಗೆ 8ನೇ ರ್‍ಯಾಂಕ್ ಮತ್ತು ವಿಥಿಕಾ ವಿ. ಶೆಟ್ಟಿ  587 ಅಂಕಗಳೊಂದಿಗೆ 10ನೇ ರ್‍ಯಾಂಕ್ ಪಡೆದಿರುತ್ತಾರೆ ಎಂದು ಕಾಲೇಜು ಪ್ರಾಂಶುಪಾಲರಾದ ಶ್ರೀ ಸಂದೀಪ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದರು. ಟ್ರಸ್ಟ್‌ನ ಆಡಳಿತ ಮಂಡಳಿ ಮತ್ತು ಕಾಲೇಜು ಉಪನ್ಯಾಸಕ ವೃಂದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ದ್ವಿತೀಯ ಪಿಯುಸಿ ವಿನೂತನ ಫಲಿತಾಂಶ ಪದ್ಧತಿಯಲ್ಲಿ ವಿದ್ಯಾರ್ಥಿಗಳ ಅಪೂರ್ವ ಸಾಧನೆ

ವಿದ್ಯೋದಯ ಟ್ರಸ್ಟ್ (ರಿ.)ನ ಅಂಗಸಂಸ್ಥೆಯಾದ ವಿದ್ಯೋದಯ ಪದವಿ ಪೂರ್ವ ಕಾಲೇಜು 2020-21ನೇ ಸಾಲಿನ ದ್ವಿತೀಯ ಪಿಯುಸಿ ವಿನೂತನ ಫಲಿತಾಂಶ ಪದ್ಧತಿಯಲ್ಲಿ 10 ವಿದ್ಯಾರ್ಥಿಗಳು 600ಕ್ಕೆ 600ಅಂಕ ಪಡೆದ ಸಾಧನೆ ಮಾಡಿರುತ್ತಾರೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಅಪೇಕ್ಷಾ, ಭಾರ್ಗವಿ ಬೋರ್ಕಾರ್, ಧನ್ಯ, ಧನ್ಯತಾ ಎನ್., ಕೀರ್ತನಾ, ಪ್ರಣಯ್ ಯು. ಶೆಟ್ಟಿ, ಸಂಜನಾ ಆರ್. ಶೇಟ್, ಸಿಂಚನಾ ಪೂಜಾರಿ, ತೇಜಸ್ವಿ ಮತ್ತು ವೈಷ್ಣವಿ ಶೇ 100 (600/600) ಫಲಿತಾಂಶ ದಾಖಲಿಸಿದ್ದಾರೆ. 

ವಿಜ್ಞಾನ ವಿಭಾಗದಲ್ಲಿ ಈ ಬಾರಿ 324 ವಿದ್ಯಾರ್ಥಿಗಳಲ್ಲಿ 190 ವಿದ್ಯಾರ್ಥಿಗಳ ವಿಶಿಷ್ಟ ಶ್ರೇಣಿಯಲ್ಲಿ, 134 ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು; ವಾಣಿಜ್ಯ ವಿಭಾಗದಲ್ಲಿ 158 ವಿದ್ಯಾರ್ಥಿಗಳಲ್ಲಿ 37 ವಿಶಿಷ್ಟ ಶ್ರೇಣಿಯಲ್ಲಿ 107 ಪ್ರಥಮ ಶ್ರೇಣಿಯಲ್ಲಿ ಮತ್ತು 14 ದ್ವಿತೀಯ ಶ್ರೇಣಿಯಲ್ಲಿ  ಉತ್ತೀರ್ಣರಾಗಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಸಾಧನೆಗೈದ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ, ಬೋಧಕ-ಬೋಧಕೇತರ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.

ಪಿ.ಯು.ಸಿ. 2020 : ವಿದ್ಯೋದಯ ಪದವಿ ಪೂರ್ವ ಕಾಲೇಜು 100%

ಉಡುಪಿಯ ವಿದ್ಯೋದಯ ಟ್ರಸ್ಟ್ (ರಿ.) ನ ಅಂಗಸಂಸ್ಥೆಯಾದ ವಿದ್ಯೋದಯ ಪದವಿಪೂರ್ವ ಕಾಲೇಜು 2019-20ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹಾಜರಾದ ವಿದ್ಯಾರ್ಥಿಗಳಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿದೆ.

ಈ ಬಾರಿ ವಿಜ್ಞಾನ ವಿಭಾಗದಲ್ಲಿ 285 ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದು; 190 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 94 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ 1 ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 

ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಅಭಿಜ್ಞ ರಾವ್ 596 ಅಂಕಗಳೊಂದಿಗೆ ಕರ್ನಾಟಕ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಪಡೆದುಕೊಂಡಿರುತ್ತಾಳೆ. ಹಾಗೆಯೇ 593 ಅಂಕಗಳೊಂದಿಗೆ ರಾಜ್ಯದ ನಾಲ್ಕನೇ ರ್‍ಯಾಂಕ್ ಗ್ರೀಷ್ಮಾ ಕೆ. , 592 ಅಂಕಗಳೊಂದಿಗೆ ಐದನೇ ರ್‍ಯಾಂಕ್ ಪದ್ಮಿಕಾ ಕೆ. ಶೆಟ್ಟಿ , 588 ಅಂಕಗಳೊಂದಿಗೆ ಒಂಬತ್ತನೇ ರ್‍ಯಾಂಕ್ ಮೈಥಿಲಿ ಪದವು ಪಡೆದಿರುತ್ತಾರೆ.

 

​ವಾಣಿಜ್ಯ ವಿಭಾಗದಲ್ಲಿ 168  ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದು; 72  ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 92 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 4 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

 

ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಇಯೋನಾ ಲೂಯಿಸ್ 589 ಅಂಕಗಳೊಂದಿಗೆ ಕರ್ನಾಟಕ ರಾಜ್ಯಕ್ಕೆ ಒಂಬತ್ತನೇ ರ್‍ಯಾಂಕ್ ಪಡೆದಿರುತ್ತಾರೆ ಎಂದು ಕಾಲೇಜು ಪ್ರಾಂಶುಪಾಲ ಶ್ರೀ ಎ.ಎಲ್.ಛಾತ್ರ ಪ್ರಕಟಣೆಯಲ್ಲಿ ತಿಳಿಸಿದರು. ಟ್ರಸ್ಟ್‌ನ ಆಡಳಿತ ಮಂಡಳಿ ಮತ್ತು ಕಾಲೇಜು ಉಪನ್ಯಾಸಕ ವೃಂದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

 

ಪಿ.ಯು.ಸಿ. 2019 : ವಿದ್ಯೋದಯ ಪದವಿ ಪೂರ್ವ ಕಾಲೇಜು 100%

ಉಡುಪಿಯ ವಿದ್ಯೋದಯ ಟ್ರಸ್ಟ್ (ರಿ.) ನ ಅಂಗಸಂಸ್ಥೆಯಾದ ವಿದ್ಯೋದಯ ಪದವಿಪೂರ್ವ ಕಾಲೇಜು 2018-19ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹಾಜರಾದ ವಿದ್ಯಾರ್ಥಿಗಳಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿದೆ.

ಈ ಬಾರಿ ವಿಜ್ಞಾನ ವಿಭಾಗದಲ್ಲಿ 266 ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದು; 149 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 116 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ 1 ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 

ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಖುಷಿ ಹಿಂದಿಯಲ್ಲಿ 98, ಇಂಗ್ಲೀಶ್ 96, ಭೌತಶಾಸ್ತ್ರ 98, ರಸಾಯನ ಶಾಸ್ತ್ರ 99, ಗಣಿತ 100 ಮತ್ತು ಜೀವಶಾಸ್ತ್ರ 98 ಗಳಿಸುವ ಮೂಲಕ ಒಟ್ಟು 589 ಗಳೊಂದಿಗೆ ರಾಜ್ಯ ಮಟ್ಟದಲ್ಲಿ 6ನೇ ರ್‍ಯಾಂಕ್ ಗಳಿಸಿದ್ದಾಳೆ. 

ವಿಜ್ಞಾನ ವಿಭಾಗದ ಅಭಿಷೇಕ್ ಎನ್. ಆಚಾರ್ಯ ದ್ವಿತೀಯ ಪಿಯುಸಿ 588 ಅಂಕಗಳೊಂದಿಗೆ ರಾಜ್ಯಕ್ಕೆ 7ನೇ ರ್‍ಯಾಂಕ್ ಪಡೆದಿರುತ್ತಾನೆ.

ವಾಣಿಜ್ಯ ವಿಭಾಗದಲ್ಲಿ 98  ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದು; 30 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 60 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 8 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಕಾಲೇಜು ಪ್ರಾಂಶುಪಾಲ ಶ್ರೀ ಎ.ಎಲ್.ಛಾತ್ರ ಪ್ರಕಟಣೆಯಲ್ಲಿ ತಿಳಿಸಿದರು. ಟ್ರಸ್ಟ್‌ನ ಆಡಳಿತ ಮಂಡಳಿ ಮತ್ತು ಕಾಲೇಜು ಉಪನ್ಯಾಸಕ ವೃಂದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

 

bottom of page