ವಿದ್ಯೋದಯ ಟ್ರಸ್ಟ್(ರಿ) ನ ಅಂಗ ಸಂಸ್ಥೆಯಾದ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ 2024-25ನೇ ಸಾಲಿನ ಪ್ರಥಮ ವರ್ಷದ ಪ್ರಾರಂಭೋತ್ಸವ ಜೂನ್ 3 ರಂದು ನೆರವೇರಿತು.
ಮುಖ್ಯ ಅಭ್ಯಾಗತರಾಗಿ ರಾಷ್ಟ್ರ ಮಟ್ಟದ ವ್ಯಕ್ತಿತ್ವ ವಿಕಸನ ತರಬೇತಿದಾರರು ಹಾಗೂ ಕಾರ್ಕಳ ಎಂ.ವಿ. ಶಾಸ್ತ್ರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ರಾಜೇಂದ್ರ ಭಟ್ ದೀಪವ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾರ್ಕ್ಸ್ ಜೊತೆಗೆ ಉತ್ತಮ ರಿಮಾರ್ಕ್ಸ್ ಕಡೆಗೂ ಗಮನ ಕೊಡುವಂತೆ ಸಲಹೆ ನೀಡಿದರು. ಪಿ.ಯು.ಸಿ ಶಿಕ್ಷಣದ ಮಹತ್ವವನ್ನು ತಿಳಿಸುತ್ತಾ ಕೇವಲ ಬಾಹ್ಯ ತೋರಿಕೆಯ ವಿಚಾರಗಳಿಗೆ ಮಹತ್ವ ಕೊಡದೆ ಆಂತರಿಕ ಸೌಂದರ್ಯವನ್ನು ಗಟ್ಟಿಗೊಳಿಸುವಲ್ಲಿ ಶ್ರಮವಹಿಸಬೇಕು ಎಂದರು.
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎನ್. ನಾಗರಾಜ ಬಲ್ಲಾಳರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು ಮತ್ತು ಕೋಶಾಧ್ಯಕ್ಷರಾದ ಶ್ರೀ ಯು. ಪದ್ಮರಾಜ್ ಆಚಾರ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಶ್ರೀ ಸಂದೀಪ್ ಕುಮಾರ್ ಇವರು ಕಾಲೇಜಿನ ಹಿಂದಿನ ಸಾಧನೆಗಳ ಅವಲೋಕನಗೈದರು. ಉಪಪ್ರಾಂಶುಪಾಲರಾದ ಶ್ರೀಮತಿ ರಂಜನಾ ಕೆ. ಅವರು ಸ್ವಾಗತಿಸಿದರು. ಉಪನ್ಯಾಸಕರಾದ ಶ್ರೀಮತಿ ಶಕುಂತಲಾ ಆರ್. ಪಾಲನ್, ಶ್ರೀ ಸಂದೀಪ್ ಶೆಣೈ, ಶ್ರೀಮತಿ ಉಷಾ ಇವರು ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನವನ್ನು ನೀಡಿದರು. ಉಪನ್ಯಾಸಕರಾದ ಶ್ರೀಮತಿ ಸಪ್ನಾ ರಾಜೇಶ್ ಅವರು ಅತಿಥಿ ಪರಿಚಯ ನೆರವೇರಿಸಿ, ಶ್ರೀಮತಿ ಸೌಮ್ಯ ಕಜೆಕಾರ್ ವಂದಿಸಿದ ಈ ಕಾರ್ಯಕ್ರಮವನ್ನು ಶ್ರೀ ಶಿವಪ್ರಸಾದ ಭಟ್ ನಿರ್ವಹಿಸಿದರು.