ಉಡುಪಿಯ ವಿದ್ಯೋದಯ ಟ್ರಸ್ಟ್ (ರಿ.) ನ ಅಂಗಸಂಸ್ಥೆಯಾದ ವಿದ್ಯೋದಯ ಪದವಿಪೂರ್ವ ಕಾಲೇಜು ೨೦೨೩-೨೪ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ದಾಖಲಿಸಿದೆ.
ಈ ಬಾರಿ ವಿಜ್ಞಾನ ವಿಭಾಗದಲ್ಲಿ 100% ಫಲಿತಾಂಶ ದಾಖಲಾಗಿದ್ದು, ಈ ವರುಷ 305 ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದು; 229 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 75 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ 1 ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 100% ಫಲಿತಾಂಶ ದಾಖಲಾಗಿದ್ದು, ಈ ವರುಷ 84 ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದು; 58 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 26 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 7 ರಾಜ್ಯ ಮಟ್ಟದ ರ್‍ಯಾಂಕಗಳು:
ವೈಭವಿ ಆಚಾರ್ಯ 597 ಅಂಕಗಳೊಂದಿಗೆ 2ನೇ ರ್‍ಯಾಂಕ್
ಶ್ರೇಯಸ್ 591 ಅಂಕಗಳೊಂದಿಗೆ 8ನೇ ರ್‍ಯಾಂಕ್
ಅನುಶ್ರೀ ಕೆ. ಮತ್ತು ಹರ್ಷ ಯು. ಪೂಜಾರಿ 590 ಅಂಕಗಳೊಂದಿಗೆ 9ನೇ ರ್‍ಯಾಂಕ್
ದಿಶಾ ಡಿ. ಕರ್ಕೇರ, ಯಶಸ್ವಿ ಮತ್ತು ಡ್ಯಾಗ್ನಿ ಕೆರೋಲ್ ನೊರೊನ್ಹ 589 ಅಂಕಗಳೊಂದಿಗೆ 10 ನೇ ರ್‍ಯಾಂಕ್
ವಾಣಿಜ್ಯ ವಿಭಾಗದಲ್ಲಿ 2 ರಾಜ್ಯ ಮಟ್ಟದ ರ್‍ಯಾಂಕಗಳು:
ರಿಯಾ ಆರ್. ಕಾಮತ್ 594 ಅಂಕಗಳೊಂದಿಗೆ 4ನೇ ರ್‍ಯಾಂಕ್
ಲಹರಿ 588 ಅಂಕಗಳೊಂದಿಗೆ 10ನೇ ರ್‍ಯಾಂಕ್