ವಿದ್ಯೋದಯ ಟ್ರಸ್ಟ್ (ರಿ.)ನ ಅಂಗಸಂಸ್ಥೆ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ 100 % ಫಲಿತಾಂಶ ದಾಖಲಿಸಿದ್ದಲ್ಲದೇ ರಾಜ್ಯಮಟ್ಟದ 13 ರ್‍ಯಾಂಕ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಶ್ರೀ ಎನ್. ನಾಗರಾಜ್ ಬಲ್ಲಳ್, ಕಾರ್ಯದರ್ಶಿ ಶ್ರೀ ಕೆ. ಗಣೇಶ್ ರಾವ್, ಕೋಶಾಧಿಕಾರಿ ಶ್ರೀ ಪದ್ಮರಾಜ ಆಚಾರ್ಯ ಮತ್ತು ಸರ್ವಸದಸ್ಯರು ಅಭಿನಂದಿಸಿ ಶುಭ ಹಾರೈಸಿದರು.
ವಿಜ್ಞಾನ ವಿಭಾಗದಲ್ಲಿ ಸ್ರಜಾ ಎಚ್. ಹೆಗ್ಡೆ 591 ಅಂಕಗಳೊಂದಿಗೆ 6ನೇ ರ್‍ಯಾಂಕ್, ಜೆರೋಹಮ್ ಲಾಯ್ಡ್ ಮಾಬೆನ್ 590 ಅಂಕಗಳು 7ನೇ ರ್‍ಯಾಂಕ್, ಸುಹಾನಿ ಎಸ್. ಗಾಂವ್ಕರ್ ಮತ್ತು ರಿಯಾ ಪೈ 589 ಅಂಕಗಳು 8 ನೇ ರ್‍ಯಾಂಕ್, ದಿಯಾ ಎಸ್. ಶೆಟ್ಟಿ 588 ಅಂಕಗಳೊಂದಿಗೆ 9ನೇ ರ್‍ಯಾಂಕ್ ಮತ್ತು 587 ಅಂಕಗಳೊಂದಿಗೆ 10ನೇ ರ್‍ಯಾಂಕ್‌ನ್ನು ರೋಶನ್ ರತ್ನಾಕರ ಪೂಜಾರಿ, ಶ್ರೇಯ ಮತ್ತು ಸಿಂಚನಾ ಸಿ. ಪೂಜಾರಿ ಗಳಿಸಿದ್ದು; ವಾಣಿಜ್ಯ ವಿಭಾಗದಲ್ಲಿ ರಮ್ಯಾ ಆರ್. ಭಟ್ 593 ಅಂಕಗಳೊಂದಿಗೆ 5ನೇ ರ್‍ಯಾಂಕ್, ಮೈಥಿಲಿ 591 ಅಂಕಗಳೊಂದಿಗೆ 7ನೇ ರ್‍ಯಾಂಕ್, ಹನ್ಫಾ ಅಸ್ಲಾಂ ಬೆಯಜಿದ್ 590 ಅಂಕಗಳು 8ನೇ ರ್‍ಯಾಂಕ್, ನಿಮಿತ್ ವೈ ಸುವರ್ಣ 589 ಅಂಕಗಳು 9ನೇ ರ್‍ಯಾಂಕ್, 588 ಅಂಕಗಳೊಂದಿಗೆ 10ನೇ ರ್‍ಯಾಂಕ್ ಸುಪ್ರೀತಾ ಗಳಿಸಿದ್ದು, ಕಾಲೇಜು ಪ್ರಾಂಶುಪಾಲರಾದ ಸಂದೀಪ್ ಕುಮಾರ್ ಮತ್ತು ಉಪಪ್ರಾಂಶುಪಾಲೆ ಶ್ರೀಮತಿ ರಂಜನಾ ಕೆ., ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಅಭಿನಂದಿಸಿರುತ್ತಾರೆ.