VIDYODAYA PRE UNIVERSITY COLLEGE
Recognised as ‘A’ Grade P.U. College by the Dept. of Pre University Education, Karnataka
A Unit of Vidyodaya Trust (R.)
Vadiraja Road, Udupi - 576101, KARNATAKA, INDIA
Phone : 0820-2531021, email: vidyodayaudp@gmail.com
ಗಣರಾಜ್ಯ ದಿನಾಚರಣೆ
26 ಜನವರಿ 2023 ಗಣರಾಜ್ಯೋತ್ಸವದಂದು ವಿದ್ಯೋದಯ ಪದವಿ ಪೂರ್ವ ಕಾಲೇಜು ಮತ್ತು ಶ್ರೀ ಅನಂತೇಶ್ವರ ಹಿರಿಯ ಪ್ರಾಥಮಿಕ ಶಾಲೆಗಳ ಧ್ವಜಾರೋಹಣವನ್ನು ಆಡಳಿತ ಮಂಡಳಿಯ ಕೋಶಾಧಿಕಾರಿಗಳಾದ ಶ್ರೀ ಪದ್ಮರಾಜ ಆಚಾರ್ಯ ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ವಿದ್ಯೋದಯ ಟ್ರಸ್ಟ್‌ನ ಕಾರ್ಯಾಧ್ಯಕ್ಷರಾದ ಶ್ರೀ ಎನ್. ನಾಗರಾಜ್ ಬಲ್ಲಾಳ್, ಕಾರ್ಯದರ್ಶಿ ಶ್ರೀ ಕೆ. ಗಣೇಶ್ ರಾವ್, ಕೋಶಾಧಿಕಾರಿ ಶ್ರೀ ಪದ್ಮರಾಜ್ ಆಚಾರ್ಯ, ಟ್ರಸ್ಟ್‌ನ ಜೊತೆ ಕಾರ್ಯದರ್ಶಿ ಶ್ರೀಮತಿ ರೂಪಾ ಬಲ್ಲಾಳ್, ಸದಸ್ಯರುಗಳಾದ ಯು. ದಾಮೋದರ್ ಮತ್ತು ರಘುರಾಮ ಆಚಾರ್ಯ; ಎಲ್ಲಾ ಶಾಲಾ ಕಾಲೇಜುಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯಿನಿಯರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿವರ್ಗ ಭಾಗವಹಿಸಿದರು.
ಕೋಟಿ ಕಂಠ ಗಾಯನ
28 ಅಕ್ಟೋಬರ್ 2022 ರಂದು ಆಯೋಜಿಸಲಾದ ಕೋಟಿ ಕಂಠಗಾಯನ
ಮಾದಕದ್ರವ್ಯ ವ್ಯಸನಮುಕ್ತ ಸಮಾಜ ನಿರ್ಮಾಣ - ಉಪನ್ಯಾಸ ಕಾರ್ಯಕ್ರಮ
ಉಡುಪಿ: ವಿದ್ಯೋದಯ ಟ್ರಸ್ಟ್ (ರಿ.)ನ ಅಂಗಸಂಸ್ಥೆ ವಿದ್ಯೋದಯ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಮಾದಕದ್ರವ್ಯ ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಜರುಗಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘ ಉಡುಪಿ, ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆ ಮತ್ತು ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ೨೯ ಸೆಪ್ಟೆಂಬರ್ ೨೦೨೨ರಂದು ಆಯೋಜಿಸಲಾಗಿತ್ತು.
ಶ್ರೀಮತಿ ಶರ್ಮಿಳಾ, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಇವರು ಕಾರ್ಯಕ್ರಮ ಉದ್ಘಾಟಿಸಿ, ಪ್ರಸ್ತಾವನೆಗೈದರು. ಡಾ| ಸುನಿಲ್, ವೈದ್ಯರು, ಎ.ವಿ. ಬಾಳಿಗ ಆಸ್ಪತ್ರ್ರೆ, ಉಡುಪಿ ಇವರು ಮಾದಕದ್ರವ್ಯ ವ್ಯಸನ ಮತ್ತು ದುಷ್ಪರಿಣಾಮಗಳ ಬಗ್ಗೆ ಮಾತನಾಡಿ ವಿದ್ಯಾರ್ಥಿಗಳು ಇದರ ವಿಷ ವರ್ತುಲದೊಳಗೆ ಸಿಗದಂತೆ ಜಾಗರೂಕರಾಗಬೇಕೆಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂದೀಪ್ ಕುಮಾರ್ ಸ್ವಾಗತಿಸಿ ಧನ್ಯವಾದ ಅರ್ಪಿಸಿದ ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶರಾದ ಶ್ರೀ ಮಾರುತಿ, ಮತ್ತು ಕಾಲೇಜಿನ ಉಪಪ್ರಾಂಶುಪಾಲೆ ಶ್ರೀಮತಿ ರಂಜನಾ ಕೆ. ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದ ಅಂತರ್ ಕಾಲೇಜು ಯೋಗಾಸನ ಸ್ಪರ್ಧೆ
10 ಸೆಪ್ಟೆಂಬರ್ 2022 ರಂದು ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಅಂತರ್ ಕಾ ಲೇಜು ಯೋಗಾಸನ ಸ್ಪರ್ಧೆ ನಡೆಯಿತು. ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿಯ ಉಪನಿರ್ದೇಶಕರಾದ ಶ್ರೀ ಮಾರುತಿಯವರ ಅಧ್ಯಕ್ಷತೆವಹಿಸಿದ್ದರು. ಕಾಲೇಜು ಆಡಳಿತ ಮಂಡಳಿಯ ಜೊತೆ ಕಾರ್ಯದರ್ಶಿ ಶ್ರೀಮತಿ ರೂಪಾ ಬಲ್ಲಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಪ್ರತಿಭಾ ಪುರಸ್ಕಾರ ಮತ್ತು ಪ್ರತಿಭಾ ಪ್ರದರ್ಶನ
ವಿದ್ಯೋದಯ ಟ್ರಸ್ಟ್‌ನ ಅಂಗಸಂಸ್ಥೆ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಪ್ರತಿಭಾ ಪುರಸ್ಕಾರ ಮತ್ತು ಪ್ರತಿಭಾ ಪ್ರದರ್ಶನ ಕಾರ್‍ಯಕ್ರಮ ಆಗಸ್ಟ್ ೧೩ ರಂದು ನೆರವೇರಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಂ.ಜಿ.ಎಂ. ಕಾಲೇಜಿನ ನಿವೃತ್ತ ಪ್ರಾಂಶುಪಾಲರೂ, ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷರೂ ಆಗಿರುವ ಶ್ರೀ ಎಂ.ಎಲ್. ಸಾಮಗ ಅವರು ವಿಶಿಷ್ಠ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ನೀಡಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಪ್ರಾಂಶುಪಾಲರಾದ ಶ್ರೀ ಸಂದೀಪ್ ಕುಮಾರ್ ಅವರು ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಕ ಮಾತುಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀ ಕೆ. ಗಣೇಶ್ ರಾವ್ ಅವರು ನಿರಂತರ ಸಾಧನೆಯ ಹಾದಿಯಲ್ಲಿ ಮುನ್ನಡೆಯಲು ವಿದ್ಯಾರ್ಥಿಗಳಿಗೆ ಹಿತವಚನವನ್ನು ನೀಡಿದರು. ಉಪಪ್ರಾಂಶುಪಾಲರಾದ ಶ್ರೀಮತಿ ರಂಜನಾ ಕೆ. ಅವರು ಸ್ವಾಗತಿಸಿ, ಶ್ರೀಮತಿ ಅನುಪಮಾ ಅವರು ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಶರಾವತಿ ಅವರು ನಿರ್ವಹಿಸಿದರು.
ಸ್ವಾತಂತ್ರ್ಯ ದಿನಾಚರಣೆ
ವಿದ್ಯೋದಯ ಪದವಿ ಪೂರ್ವ ಕಾಲೇಜು ಮತ್ತು ಶ್ರೀ ಅನಂತೇಶ್ವರ ಹಿರಿಯ ಪ್ರಾಥಮಿಕ ಶಾಲೆಗಳ ಧ್ವಜಾರೋಹಣವನ್ನು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಶ ್ರೀ ಎ.ಎಲ್. ಛಾತ್ರ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ವಿದ್ಯೋದಯ ಟ್ರಸ್ಟ್‌ನ ಕಾರ್ಯದರ್ಶಿ ಶ್ರೀ ಕೆ. ಗಣೇಶ್ ರಾವ್, ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಕುಮಾರ್, ಉಪ ಪ್ರಾಂಶುಪಾಲೆ ಶ್ರೀಮತಿ ರಂಜನಾ ಕೆ., ಶ್ರೀ ಅನಂತೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಬಿ.ಜಿ. ಶಶಿರೇಖಾ ಉಪಸ್ಥಿತರಿದ್ದರು. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ದೇಶಭಕ್ತಿ ಸಾರುವ ಮನರಂಜನಾ ಕಾರ್ಯಕ್ರಮ ನಡೆಯಿತು.
ನಶಾಮುಕ್ತ ಸಮಾಜ ನಿರ್ಮಾಣ
12 ಆಗಸ್ಟ್ 2022 ರಂದು ಕಾಲೇಜಿನ ವಿದ್ಯಾರ್ಥಿಗಳು ನಶಾಮುಕ್ತ ಸಮಾಜ ನಿರ್ಮಾಣದ ಬಗ್ಗೆ ಪ್ರಮಾಣ ವಚನ ಸ್ವೀಕರಿಸಿದರು.
ಪ್ರತಿಭಾ ಪುರಸ್ಕಾರ ಮತ್ತು ಪ್ರತಿಭಾ ಪ್ರದರ್ಶನ
ವಿದ್ಯೋದಯ ಟ್ರಸ್ಟ್‌ನ ಅಂಗಸಂಸ್ಥೆ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಪ್ರತಿಭಾ ಪುರಸ್ಕಾರ ಮತ್ತು ಪ್ರತಿಭಾ ಪ್ರದರ್ಶನ ಕಾರ್‍ಯಕ್ರಮ ಆಗಸ್ಟ್ 13 ರಂದು ನೆರವೇರಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಂ.ಜಿ.ಎಂ. ಕಾಲೇಜಿನ ನಿವೃತ್ತ ಪ್ರಾಂಶುಪಾಲರೂ, ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷರೂ ಆಗಿರುವ ಶ್ರೀ ಎಂ.ಎಲ್. ಸಾಮಗ ಅವರು ವಿಶಿಷ್ಠ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ನೀಡಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಪ್ರಾಂಶುಪಾಲರಾದ ಶ್ರೀ ಸಂದೀಪ್ ಕುಮಾರ್ ಅವರು ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಕ ಮಾತುಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀ ಕೆ. ಗಣೇಶ್ ರಾವ್ ಅವರು ನಿರಂತರ ಸಾಧನೆಯ ಹಾದಿಯಲ್ಲಿ ಮುನ್ನಡೆಯಲು ವಿದ್ಯಾರ್ಥಿಗಳಿಗೆ ಹಿತವಚನವನ್ನು ನೀಡಿದರು.
ಉಪಪ್ರಾಂಶುಪಾಲರಾದ ಶ್ರೀಮತಿ ರಂಜನಾ ಕೆ. ಅವರು ಸ್ವಾಗತಿಸಿ, ಶ್ರೀಮತಿ ಅನುಪಮಾ ಅವರು ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಶರಾವತಿ ಅವರು ನಿರ್ವಹಿಸಿದರು.
ಯಶಸ್ಸಿನತ್ತ ಸಾಗಿ
ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ
ಜೂನ್ 20: ಉಡುಪಿಯ ವಿದ್ಯೋದಯ ಟ್ರಸ್ಟ್ (ರಿ.)ನ ಅಧ್ಯಕ್ಷರೂ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಪದವಿ ಪೂರ್ವ ಶಿಕ್ಷಣವು ವೃತ್ತಿ ಶಿಕ್ಷಣದ ಪ್ರಾಥಮಿಕ ಹಂತವಾಗಿದ್ದು ಇಲ್ಲಿ ಗಳಿಸಿರುವ ಉತ್ತಮ ಫಲಿತಾಂಶ ನಿಮ್ಮ ಯಶಸ್ಸಿನ ಪಯಣದ ಮೊದಲ ಹೆಜ್ಜೆಯಾಗಿದೆ. ಯಶಸ್ಸಿನತ್ತ ಸಾಗಿ ಉತ್ತಮ ನಾಗರೀಕರಾಗಿರಿ ಎಂದು ಆಶೀರ್ವಚನ ನೀಡಿದರು. 2021-22 ರ ಸಾಲಿನಲ್ಲಿ ರಾಜ್ಯಮಟ್ಟದ ರ್‍ಯಾಂಕ್‌ಗಳನ್ನು ಪಡೆದು ಸಾಧನೆಗೈದ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಾ ಶುಭ ಹಾರೈಸಿದರು.
ವಿಜ್ಞಾನದಲ್ಲಿ ಓಂಕಾರ್ ಪ್ರಭು ರಾಜ್ಯ ಮಟ್ಟದಲ್ಲಿ 3ನೇ ರ್‍ಯಾಂಕ್; ನಿಯತಾ 5 ನೇ ರ್‍ಯಾಂಕ್, ಲಕ್ಷ್ಮೀ ಪಿ. 7ನೇ ರ್‍ಯಾಂಕ್, ಪ್ರಣಮ್ಯ ಆಚಾರ್ಯ, ಕೆ.ಎಸ್. ನಿಹಾರಿಕಾ ನವ್ಯಾ ದಿನೇಶ್ ಶೆಟ್ಟಿ 8ನೇ ರ್‍ಯಾಂಕ್, ಪಾವನ್ ಎ. ಶೆಟ್ಟಿ, ಈಶಾ ಕುಂದರ್, ಅಮರನಾಥ ಭಟ್ ಬಿ. ಮತ್ತು ಚಿನ್ಮಯ ಅಡಿಗ 9 ನೇ ರ್‍ಯಾಂಕ್ ಹಾಗೂ ಜಾಗೃತಿ ಚಂದ್ರಶೇಖರ್ ಮತ್ತು ಅವನಿ 10ನೇ ರ್‍ಯಾಂಕ್ ಪಡೆದಿದ್ದು ಅಲ್ಲದೇ ವಾಣಿಜ್ಯ ವಿಭಾಗದಲ್ಲಿ ಮೇಘನಾ ಮೆಂಡನ್ 6 ನೇ ರ್‍ಯಾಂಕ್, ಹಿರಲ್ ಸುಂದರ್ 7ನೇ ರ್‍ಯಾಂಕ್, ದರ್ಶನ್ ಆರ್. ಶೆಟ್ಟಿ ಮತ್ತು ಲರಿಸ್ಸಾ ಹೆಜಲ್ ನಜರೆತ್ 8ನೇ ರ್‍ಯಾಂಕ್ ಮತ್ತು ವಿಥಿಕಾ ವಿ. ಶೆಟ್ಟಿ 10ನೇ ರ್‍ಯಾಂಕ್ ಅಲ್ಲದೇ 4 ವಿಷಯಗಳಲ್ಲಿ 100 ಕ್ಕೆ 100 ಅಂಕಗಳನ್ನು (ಪಿ.ಸಿ.ಎಂ.ಇ.ಯಲ್ಲಿ) ಪಡೆದಿರುವ ಪ್ರಜ್ವಲ್ ಮತ್ತು ಶರಧಿ ಹೆಗಡೆ ಈ ವಿದ್ಯಾರ್ಥಿಗಳಿಗೆ ವಿದ್ಯೋದಯ ಟ್ರಸ್ಟ್ ನ ಕಾರ್ಯಾಧ್ಯಕ್ಷರಾದ ಶ್ರೀ ಎನ್. ನಾಗರಾಜ ಬಲ್ಲಾಳ್ ಮತ್ತು ಕಾಲೇಜು ಪ್ರಾಂಶುಪಾಲರಾದ ಶ್ರೀ ಸಂದೀಪ್ ಕುಮಾರ್ ಶುಭ ಹಾರೈಸಿದರು. ಪ್ರತಿ ಸಾಧಕ ವಿದ್ಯಾರ್ಥಿಗೂ ಅಭಿನಂದನಾಪೂರ್ವಕವಾಗಿ ಪ್ರಶಸ್ತಿ ಫಲಕ ಹಾಗೂ ತಲಾ ರೂ. 5,000 ನಗದು ಪುರಸ್ಕಾರ ನೀಡಲಾಯ್ತು.
ಟ್ರಸ್ಟ್‌ನ ಕಾರ್ಯದರ್ಶಿ ಶ್ರೀ ಕೆ. ಗಣೇಶ್ ರಾವ್, ಜೊತೆ ಕಾರ್ಯದರ್ಶಿ ಶ್ರೀಮತಿ ರೂಪಾ ಬಲ್ಲಾಳ್, ಕೋಶಾಧಿಕಾರಿ ಶ್ರೀ ಯು. ಪದ್ಮರಾಜ್ ಆಚಾರ್ಯ ಉಪಸ್ಥಿತರಿದ್ದ ಈ ಕಾರ್ಯಕ್ರಮದಲ್ಲಿ ಶ್ರೀಮತಿ ರಂಜನಾ ಕೆ. ಸ್ವಾಗತಿಸಿ, ಶಿವಪ್ರಸಾದ ಭಟ್ ವಂದಿಸಿ, ಶ್ರೀಮತಿ ಅನುಪಮಾ ನಿರ್ವಹಿಸಿದರು.
ಪ್ರಥಮ ಪಿಯುಸಿ ಪ್ರಾರಂಭೋತ್ಸವ
ಆದರ್ಶ ವ್ಯಕ್ತಿಗಳ ಗುಣಗಳನ್ನು ಮೈಗೂಡಿಸಿಕೊಳ್ಳಿ
ಉಡುಪಿ: ನಿರಂತರ ಸಾಧನೆಯನ್ನೇ ಧ್ಯೇಯವನ್ನಾಗಿಸಿಕೊಂಡು ಯಶಸ್ವಿಯಾಗಿ ಮುನ್ನೆಡೆಯುತ್ತಿರುವ ಶೇಕಡಾ 100ರ ಫಲಿತಾಂಶದೊಂದಿಗೆ ಸಾಂಸ್ಕೃತಿಕ-ಕ್ರೀಡಾ ಕ್ಷೇತ್ರಗಳಲ್ಲೂ ರಾಜ್ಯ-ರಾಷ್ಟ್ರ ಮಟ್ಟಗಳಲ್ಲಿ ಗುರುತಿಸಲ್ಪಡುತ್ತಿರುವ ಕರ್ನಾಟಕದ ಪ್ರತಿಷ್ಠಿತ ವಿದ್ಯಾಸಂಸ್ಥೆ ಉಡುಪಿಯ ವಿದ್ಯೋದಯ ಟ್ರಸ್ಟ್‌ನ ಅಂಗ ಸಂಸ್ಥೆ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ಪ್ರಥಮ ಪಿಯುಸಿಯ ಪ್ರಾರಂಭೋತ್ಸವವು 13 ಜೂನ್ 2022 ರಂದು ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ, ಸಂಪನ್ಮೂಲ ವ್ಯಕ್ತಿಯಾಗಿ ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ, ಪ್ರಾಂಶುಪಾಲರು, ರಾಮಕೃಷ್ಣ ಕಾಲೇಜು, ಮಂಗಳೂರು ಇವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮೇಲಿನಂತೆ ಹಿತವಚನ ನುಡಿಯುತ್ತಾ ಸಾಧನೆಯನ್ನೇ ಜೀವಾಳವನ್ನಾಗಿಸಿಕೊಳ್ಳಲು ಇವತ್ತಿನ ವಿದ್ಯಾರ್ಥಿ ಸಮೂಹಕ್ಕೆ ಅವಶ್ಯವೆನಿಸಿದ ಛಲ, ಸ್ಥಿರತೆ, ಏಕಾಗ್ರತೆ ಮತ್ತು ಸಮತೋಲನದ ಬದುಕನ್ನು ಕಂಡುಕೊಳ್ಳುವ ಬಗೆಯನ್ನು ವಿವರಿಸಿದರು.
ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀ ಕೆ. ಗಣೇಶ್ ರಾವ್ ಅವರು ಈ ಸಮಾರಂಭದ ಅಧ್ಯಕ್ಷರಾಗಿದ್ದು ಶಿಸ್ತು-ಸಂಯಮ-ಸಂಸ್ಕಾರಗಳು ವಿದ್ಯಾರ್ಥಿಯ ಕಲಿಕೆಯಲ್ಲಿ ಮಹತ್ತರ ಪಾತ್ರವಹಿಸುವ ಬಗ್ಗೆ ತಿಳಿಸಿದರು.
ಸಂಸ್ಥೆಯ ಈ ಹಿಂದಿನ ವಿದ್ಯಾರ್ಥಿಗಳ ಸಾಧನೆಗಳ ಬಗ್ಗೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂದೀಪ್ ಕುಮಾರ್ ಮೆಚ್ಚುಗೆಯ ಮಾತುಗಳನ್ನಾಡಿ ಈ ಸಾಲಿನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಎಲ್ಲಾ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದ ಈ ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲೆ ಶ್ರೀಮತಿ ರಂಜನಾ ಕೆ. ಸ್ವಾಗತಿಸಿ, ಸಂಸ್ಕೃತ ಉಪನ್ಯಾಸಕ ಶಿವಪ್ರಸಾದ ಭಟ್ ವಂದಿಸಿ; ಹಿಂದಿ ಉಪನ್ಯಾಸಕಿ ಶ್ರೀಮತಿ ವಿಜಯಲಕ್ಷ್ಮೀ ನಿರ್ವಹಿಸಿದರು.