top of page

ವಿದ್ಯೋದಯ ಪದವಿ ಪೂರ್ವ ಕಾಲೇಜು, ಉಡುಪಿ
ಪ್ರಾಂಶುಪಾಲರಾಗಿ ಶ್ರೀ ಸಂದೀಪ್ ಕುಮಾರ್

a6f8164f-7e77-4854-b678-630dd76900c2.jpg

ಉಡುಪಿ: ವಿದ್ಯೋದಯ ಟ್ರಸ್ಟ್ (ರಿ.)ನ ಅಂಗಸಂಸ್ಥೆ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಶ್ರೀ ಸಂದೀಪ್ ಕುಮಾರ್ ಅವರು ಶ್ರೀ ಎ. ಲಕ್ಷ್ಮೀನಾರಾಯಣ ಛಾತ್ರರಿಂದ ಅಧಿಕಾರ ಸ್ವೀಕರಿಸಿದ್ದಾರೆ. ಪ್ರಾಂಶುಪಾಲರಾಗಿ ಶ್ರೀ ಎ. ಲಕ್ಷ್ಮೀನಾರಾಯಣ ಛಾತ್ರರು 14 ವರುಷ ಸೇವೆ ಸಲ್ಲಿಸಿರುತ್ತಾರೆ.


ಪ್ರಾಂಶುಪಾಲರಾಗಿ 5 ವರುಷ ಮತ್ತು ಗಣಿತಶಾಸ್ತ್ರ ಉಪನ್ಯಾಸಕರಾಗಿ 31 ವರುಷ ಅನುಭವವುಳ್ಳ ಶ್ರೀ ಸಂದೀಪ್ ಕುಮಾರ್ ಅವರಿಗೆ ವಿದ್ಯೋದಯ ಟ್ರಸ್ಟ್ (ರಿ.)ನ ಕಾರ್ಯಾಧ್ಯಕ್ಷರಾದ ಶ್ರೀ ಎನ್. ನಾಗರಾಜ್ ಬಲ್ಲಾಳ್ ಶುಭ ಹಾರೈಸಿದರು. ಟ್ರಸ್ಟ್‌ನ ಕಾರ್ಯದರ್ಶಿ ಶ್ರೀ ಕೆ. ಗಣೇಶ್ ರಾವ್, ಕೋಶಾಧಿಕಾರಿ ಶ್ರೀ ಪದ್ಮರಾಜ ಆಚಾರ್ಯ, ಜೊತೆ ಕಾರ್ಯದರ್ಶಿ ಶ್ರೀಮತಿ ರೂಪಾ ಬಲ್ಲಾಳ್, ಸದಸ್ಯರುಗಳಾದ ಶ್ರೀ ಯು. ದಾಮೋದರ್ ಮತ್ತು ಶ್ರೀ ರಘುರಾಮ ಆಚಾರ್ಯ ಉಪಸ್ಥಿತರಿದ್ದರು.

ವಿದ್ಯೋದಯದಲ್ಲಿ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ

ವಿದ್ಯೋದಯ ಟ್ರಸ್ಟ್(ರಿ.)ನ ಅಂಗಸಂಸ್ಥೆಯಾದ ವಿದ್ಯೋದಯ ಪ.ಪೂ ಕಾಲೇಜು, ಉಡುಪಿ ಇಲ್ಲಿ  ದಿನಾಂಕ: 16-03-2021 ರಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ ನಡೆಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ. ಎನ್. ನಾಗರಾಜ ಬಲ್ಲಾಳರು ನೆರವೇರಿಸಿ, ಶುಭ ಹಾರೈಸಿದರು. ಜಿಲ್ಲಾ ಕ್ರೀಡಾ ಸಂಯೋಜನಾಧಿಕಾರಿಗಳಾದ ಶ್ರೀ ದಿನೇಶ್ ಕುಮಾರ್ ಅವರು ಮುಖ್ಯ ಅತಿಥಿಗಳಾಗಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ. ಎ.ಲಕ್ಷ್ಮೀನಾರಾಯಣ ಛಾತ್ರಾ ಸ್ವಾಗತಿಸಿದರು. ನಿಯೋಜಿತ ಪ್ರಾಂಶುಪಾಲರಾದ ಶ್ರೀ ಸಂದೀಪ್ ಕುಮಾರ್ ಅವರು ಉಪಸ್ಥಿತರಿದ್ದ ಈ ಕಾರ್ಯಕ್ರಮವನ್ನು ಉಪನ್ಯಾಸಕರಾದ  ಶ್ರೀ ಶಿವಪ್ರಸಾದ್ ಭಟ್ ಇವರು ನಿರೂಪಿಸಿದರು. ದೈಹಿಕ ಶಿಕ್ಷಣ ಉಪನ್ಯಾಸಕರಾದ ಶ್ರೀ ವಿನಯ್ ಅವರು ವಂದಿಸಿದರು. ಉಡುಪಿ ಜಿಲ್ಲೆಯ ಹಲವಾರು ಕಾಲೇಜಿನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಉಡುಪಿ ಜಿಲ್ಲಾ ಭೌತಶಾಸ್ತ್ರ ಉಪನ್ಯಾಸಕರ ಪುನಶ್ಚೇತನ ಕಾರ್ಯಾಗಾರ

ಉಡುಪಿ: ವಿದ್ಯೋದಯ ಟ್ರಸ್ಟ್ (ರಿ.)ನ ಅಂಗಸಂಸ್ಥೆ ವಿದ್ಯೋದಯ ಪದವಿ ಪೂರ್ವ ಕಾಲೇಜು ಉಡುಪಿ ಇಲ್ಲಿ ದಿನಾಂಕ 9 ಮಾರ್ಚ್ 2021 ರಂದು ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಭೌತಶಾಸ್ತ್ರ ಉಪನ್ಯಾಸಕರಿಗೆ ಒಂದು ದಿನದ ಕಾರ್ಯಾಗಾರ  ಆಯೋಜಿಸಲಾಯ್ತು. 2020-21ನೇ ಶೈಕ್ಷಣಿಕ  ಸಾಲಿನ ಕಡಿತ ಗೊಳಿಸಲಾದ ಪಠ್ಯಕ್ರಮ,  ಮಾದರಿ ಪ್ರಶ್ನೆ ಪತ್ರಿಕೆಗಳ ವಿನ್ಯಾಸ, ತಾತ್ವಿಕ ಹಾಗೂ ಪ್ರಾಯೋಗಿಕ ಪರೀಕ್ಷೆಗಳು ಮತ್ತು  ವಿಷಯವಾರು ಪೂರ್ಣ ಫಲಿತಾಂಶ ಇತ್ಯಾದಿಗಳ ಬಗ್ಗೆ ಉಪನ್ಯಾಸಕರಿಗೆ ಮಾರ್ಗದರ್ಶನ ನೀಡಲಾಯ್ತು. ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖಾ ಉಪನಿರ್ದೇಶಕರು ಶ್ರೀ ಭಗವಂತ ಕಟ್ಟಿಮನಿ ಕಾರ್ಯಕ್ರಮ ಉದ್ಘಾಟಿಸಿ ಶಿಬಿರದ ಉದ್ದೇಶಗಳ ಕುರಿತು ಮಾತಾಡಿದರು. ವಿದ್ಯೋದಯ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀ ಕೆ. ಗಣೇಶ್ ರಾವ್ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲ ಶ್ರೀ ಎ. ಲಕ್ಷ್ಮೀನಾರಾಯಣ ಛಾತ್ರ ಸ್ವಾಗತಿಸಿದರು. ಕಾಲೇಜಿನ ನಿಯೋಜಿತ ಪ್ರಾಂಶುಪಾಲ ಶ್ರೀ ಸಂದೀಪ್ ಕುಮಾರ್ ಮತ್ತು ಉಡುಪಿ ಜಿಲ್ಲಾ ಎಲ್ಲಾ ಕಾಲೇಜುಗಳ ಭೌತಶಾಸ್ತ್ರ ಉಪನ್ಯಾಸಕರು ಉಪಸ್ಥಿತರಿದ್ದ ಈ ಕಾರ್ಯಕ್ರಮವನ್ನು ಭೌತಶಾಸ್ತ್ರ ಉಪನ್ಯಾಸಕ ಸಂಘದ ಕಾರ್ಯದರ್ಶಿ ಶ್ರೀ ಉಮಾಪತಿ ಧನ್ಯವಾದ ಸಲ್ಲಿಸಿ ಮತ್ತು ಶ್ರೀ ಸದಾನಂದ, ಉಪನ್ಯಾಸಕರು ಸರಕಾರಿ ಪ.ಪೂ.ಕಾಲೇಜು, ಕಾರ್ಕಳ ನಿರೂಪಿಸಿದರು.

ಪರಮ ಪೂಜ್ಯ ಪೇಜಾವರ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರ

ಪ್ರಥಮ ಆರಾಧನೆ

WA_IMG_704.jpg

ಉಡುಪಿ: ವಿದ್ಯೋದಯ ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರೂ ಆದ ಪರಮ ಪೂಜ್ಯ ಪೇಜಾವರ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪ್ರಥಮ ಆರಾಧನೆಯನ್ನು ಡಿಸೆಂಬರ್ 17, 2020 ರಂದು ಆಚರಿಸಲಾಯ್ತು. ಶ್ರೀಗಳ ಕೊಡುಗೆಗಳನ್ನು ನೆನೆದು, ಭಜನೆ, ಶ್ಲೋಕ ಪಠಣಗಳೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯೋದಯ ಟ್ರಸ್ಟ್ (ರಿ.)ನ ಅಧ್ಯಕ್ಷರಾದ ಎನ್. ನಾಗರಾಜ ಬಲ್ಲಾಳ್, ಕಾರ್ಯದರ್ಶಿ ಕೆ. ಗಣೇಶ್ ರಾವ್, ಕೋಶಾಧಿಕಾರಿ ಯು. ಪದ್ಮರಾಜ್ ಆಚಾರ್ಯ, ಜೊತೆ ಕಾರ್ಯದರ್ಶಿ ಶ್ರೀಮತಿ ರೂಪಾ ಬಲ್ಲಾಳ್ ಮತ್ತು ವಿದ್ಯೋದಯ ಸಮೂಹ ಸಂಸ್ಥೆಗಳ ಎಲ್ಲಾ ಪ್ರಾಂಶುಪಾಲರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಭಾಗವಹಿಸಿದರು.

ಆನ್‍ಲೈನ್‍ನಲ್ಲಿ : ಪ್ರಥಮ ಪಿ.ಯು.ಸಿ. ವಿದ್ಯಾರ್ಥಿಗಳ ಆರಂಭೋತ್ಸವ

ಕರ್ನಾಟಕ ರಾಜ್ಯದ ಪದವಿಪೂರ್ವ ಶಿಕ್ಷಣ ಕ್ಷೇತ್ರದಲ್ಲೇ ಕಳೆದ ಹನ್ನೆರಡು ವರ್ಷದಲ್ಲಿ ಒಂಬತ್ತು ಬಾರಿ 100% ಫಲಿತಾಂಶವನ್ನು ಪಡೆದು ಸಾಧನೆಗೈದ ಏಕಮೇವ ವಿದ್ಯಾಲಯವೆಂಬ ಖ್ಯಾತಿಗೆ ಪಾತ್ರವಾದ ಉಡುಪಿಯ ವಿದ್ಯೋದಯ ಟ್ರಸ್ಟ್‌ನ ಅಂಗ ಸಂಸ್ಥೆ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಆರಂಭೋತ್ಸವವು ದಿನಾಂಕ: 15-08-2020 ರಂದು ನಡೆಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿದ್ದ ಡಾ| ವಿವೇಕ್ ಉಡುಪ, ಪ್ರಧಾನ ನಿರ್ದೇಶಕರು, ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನ, ಸಾಲಿಗ್ರಾಮ ಇವರು ಪದವಿಪೂರ್ವ ಶಿಕ್ಷಣದ ಮಹತ್ವ; ವಿದ್ಯಾರ್ಥಿಗಳಲ್ಲಿರಬೇಕಾದ ಆಸಕ್ತಿ - ಶ್ರದ್ಧೆ - ಪರಿಶ್ರಮಕ್ಕೆ ಸಂಬಂಧಿಸಿದಂತೆ ಅಲ್ಲದೆ ಮಕ್ಕಳ ಸರ್ವತೋಮುಖವಾದ ಪ್ರಗತಿಯಲ್ಲಿ ಪೋಷಕರ ಪಾತ್ರದ ಕುರಿತು ಮಾತನಾಡಿದರು. 2019-20 ರ ಶೈಕ್ಷಣಿಕ ವರುಷದ ವಿಜ್ಞಾನ ವಿಭಾಗದಲ್ಲಿ ರಾಜ್ಯದ ಪ್ರಥಮ ರ್‍ಯಾಂಕ್ ಪಡೆದ ಕಾಲೇಜಿನ ವಿದ್ಯಾರ್ಥಿನಿ ಅಭಿಜ್ಞ ರಾವ್‍ರನ್ನು ಅಭಿನಂದಿಸಲಾಯ್ತು.

ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ.ಎನ್.ನಾಗರಾಜ ಬಲ್ಲಾಳ, ಕಾರ್ಯದರ್ಶಿಗಳಾದ ಶ್ರೀ. ಕೆ. ಗಣೇಶ್ ರಾವ್, ಕೋಶಾಧಿಕಾರಿ ಶ್ರೀ ಪದ್ಮರಾಜ ಆಚಾರ್ಯ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಶ್ರೀ.ಎ.ಎಲ್.ಛಾತ್ರ ಶುಭ ಹಾರೈಸಿದರು. ಆನ್‍ಲೈನ್‍ನಲ್ಲಿ ಎಲ್ಲಾ ವಿದ್ಯಾರ್ಥಿಗಳು, ಪಾಲಕ ಪೋಷಕರು ಮತ್ತು ಉಪನ್ಯಾಸಕವೃಂದ ಈ ಕಾರ್ಯಕ್ರಮದ ಪ್ರಯೋಜನ ಪಡೆದರು.
 

ಸ್ವಾತಂತ್ರ್ಯ ದಿನಾಚರಣೆ 

ವಿದ್ಯೋದಯ ಟ್ರಸ್ಟ್(ರಿ.)ನ ಅಂಗಸಂಸ್ಥೆಗಳಾದ ವಿದ್ಯೋದಯ ಪದವಿ ಪೂರ್ವ ಕಾಲೇಜು, ವಿದ್ಯೋದಯ ಪಬ್ಲಿಕ್ ಸ್ಕೂಲ್, ಶ್ರೀ ಅನಂತೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಶ್ರೀ ಅನಂತೇಶ್ವರ ಹಿರಿಯ ಪ್ರಾಥಮಿಕ ಶಾಲೆ, ವಿದ್ಯೋದಯ ವಿದ್ಯಾಲಯ, ಶ್ರೀಕೃಷ್ಣ ಶಿಶುಮಂದಿರಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಮುಖ್ಯ ಅತಿಥಿ ಡಾ| ವಿವೇಕ್ ಉಡುಪ, ಪ್ರಧಾನ ನಿರ್ದೇಶಕರು, ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನ, ಸಾಲಿಗ್ರಾಮ ಇವರು ಧ್ವಜಾರೋಹಣಗೈದರು. 2019-20ರ ಸಾಲಿನಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ರಥಮ ರ್‍ಯಾಂಕ್ ಗಳಿಸಿದ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿದ್ಯಾರ್ಥಿನಿ ಅಭಿಜ್ಞ ರಾವ್ ಅವರನ್ನು ಡಾ| ವಿವೇಕ್ ಉಡುಪ ಸನ್ಮಾನಿಸಿ ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ವಿದ್ಯೋದಯ ಟ್ರಸ್ಟ್‌ನ ಕಾರ್ಯಾಧ್ಯಕ್ಷರಾದ ಶ್ರೀ ಎನ್. ನಾಗರಾಜ್ ಬಲ್ಲಾಳ್, ಕಾರ್ಯದರ್ಶಿ ಶ್ರೀ ಕೆ. ಗಣೇಶ್ ರಾವ್, ಕೋಶಾಧಿಕಾರಿ ಶ್ರೀ ಪದ್ಮರಾಜ್ ಆಚಾರ್ಯ, ಟ್ರಸ್ಟ್‌ನ ಜೊತೆ ಕಾರ್ಯದರ್ಶಿ ಶ್ರೀಮತಿ ರೂಪಾ ಬಲ್ಲಾಳ್, ಸದಸ್ಯರುಗಳಾದ ಯು. ದಾಮೋದರ್ ಮತ್ತು ರಘುರಾಮ ಆಚಾರ್ಯ; ಎಲ್ಲಾ ಶಾಲಾ ಕಾಲೇಜುಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯಿನಿಯರು, ಮತ್ತು ಸಿಬ್ಬಂದಿವರ್ಗ ಭಾಗವಹಿಸಿದರು.

bottom of page