VIDYODAYA PRE UNIVERSITY COLLEGE
Recognised as ‘A’ Grade P.U. College by the Dept. of Pre University Education, Karnataka
A Unit of Vidyodaya Trust (R.)
Vadiraja Road, Udupi - 576101, KARNATAKA, INDIA
Phone : 0820-2531021, email: vidyodayaudp@gmail.com
Annual Day
Sports Day
On 11th November, sports day was inaugurated by Sri Chandrashekara Hegde, President, Brahmavara Sports Club.
ಸಂಖ್ಯಾಶಾಸ್ತ್ರ ಉಪನ್ಯಾಸಕರ ಕಾರ್‍ಯಾಗಾರ
ದಿನಾಂಕ: 20-09-2019 ರಂದು ಉಡುಪಿಯ ವಿದ್ಯೋದಯ ಟ್ರಸ್ಟ್‌ನ ಅಂಗಸಂಸ್ಥೆಯಾದ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ ಉಡುಪಿ ಜಿಲ್ಲಾ ಹಾಗೂ ಪದವಿ ಪೂರ್ವ ಕಾಲೇಜುಗಳ ಸಂಖ್ಯಾಶಾಸ್ತ್ರ ಉಪನ್ಯಾಸಕರ ಸಂಘದ ಒಂದು ದಿನದ ವಿಶೇಷ ಕಾರ್‍ಯಾಗಾರ ನೆರವೇರಿತು. ಮೂಡುಬೆಳ್ಳೆ, ಸೈಂಟ್ ಲಾರೆನ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಹಾಗೂ ಪದವಿ ಪೂರ್ವ ಕಾಲೇಜುಗಳ ಸಂಖ್ಯಾಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷರೂ ಆಗಿರುವ ಶ್ರೀ ದೇವದಾಸ ಶ್ಯಾನುಭಾಗರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನ್ನಾಡಿದರು. ಉದ್ಘಾಟಕರಾದ ವಿದ್ಯೋದಯ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ನಾಗರಾಜ್ ಬಲ್ಲಾಳ್, ಕಾರ್‍ಯದರ್ಶಿಗಳಾದ ಶ್ರೀ ಕೆ. ಗಣೇಶ್‌ರಾವ್ ಮತ್ತು ವಿದ್ಯೋದಯದ ಪ್ರಾಂಶುಪಾಲರಾದ ಶ್ರೀ ಎ.ಎಲ್. ಛಾತ್ರ ಅವರು ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು.
ಕಾರ್ಯಕ್ರಮದ ಅಧ್ಯಕ್ಷರಾದ ಉಡುಪಿ, ಕಿದಿಯೂರಿನ ಶ್ಯಾಮಿಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ|| ರಾಜ್‌ಮೋಹನ್ ಇವರು ಸಂಖ್ಯಾಶಾಸ್ತ್ರದ ವಿಚಾರಗಳನ್ನು ವಿವರಿಸಲು ಸಾಕಷ್ಟು ಸಮಯ... ಸಾಕಷ್ಟು ಉದಾಹರಣೆಗಳು... ಹೋಲಿಕೆಗಳು ಬೇಕಾಗುತ್ತದೆ. ಅಂದಾಜು ಪಟ್ಟಿಯ ವಿಚಾರವನ್ನು ಅರಿಯಬೇಕಾದರೆ ವಿಷಯದ ಸೂಕ್ಷ್ಮತೆ ಇರಬೇಕು ಎನ್ನುತ್ತಾ ಕಾರ್‍ಯಾಗಾರಕ್ಕೆ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಎಸ್.ವಿ.ಎಸ್. ಪದವಿ ಪೂರ್ವ ಕಾಲೇಜು, ಬಂಟ್ವಾಳದ ಪ್ರೊ|| ಎನ್.ಎಸ್. ಮಹಾಬಲೇಶ್ವರ ಶರ್ಮ ಅವರು ಉಪಯುಕ್ತ ಉಪನ್ಯಾಸ ನೀಡಿದರು.
ಶ್ರೀ ದುರ್ಗಾಪರಮೇಶ್ವರಿ ಪದವಿ ಪೂರ್ವ ಕಾಲೇಜು, ಮಂದಾರ್ತಿ ಇಲ್ಲಿನ ಉಪನ್ಯಾಸಕರಾದ ಶ್ರೀ ಪ್ರಭಾಕರ್ ಅವರು ವಂದನಾರ್ಪಣೆ ನೆರವೇರಿಸಿದರು. ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀ ಪವನ್‌ಭಟ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.
ಗಣಿತಶಾಸ್ತ್ರ ವಿಶೇಷ ಕಾರ್ಯಾಗಾರ
ಉಡುಪಿ: ವಿದ್ಯೋದಯ ಟ್ರಸ್ಟ್ (ರಿ.)ನ ಅಂಗ ಸಂಸ್ಥೆಯಾದ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ ಆಗಸ್ಟ್ 16ರಂದು ಉಡುಪಿ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಗಣಿತಶಾಸ್ತ್ರ ಉಪನ್ಯಾಸಕರಿಗೆ ಒಂದು ದಿನದ ಕಾರ್ಯಾಗಾರವನ್ನು ಗಣಿತ ಉಪನ್ಯಾಸಕರ ಸಂಘ ಅಯೋಜಿಸಿತ್ತು.
ವಿದ್ಯೋದಯ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎನ್. ನಾಗರಾಜ ಬಲ್ಲಾಳ್‌ರು ಉದ್ಘಾಟಿಸುವ ಮೂಲಕ ಕಾರ್ಯಾಗಾರಕ್ಕೆ ಚಾಲನೆಯನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀ ಕೆ. ಗಣೇಶ್ ರಾವ್ ಮತ್ತು ವಿದ್ಯೋದಯ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಎಲ್. ಛಾತ್ರರು ಕಾರ್ಯಾಗಾರಕ್ಕೆ ಶುಭ ಹಾರೈಸಿದರು.
ಕಾಸರಗೋಡಿನ ಚಿನ್ಮಯ ವಿದ್ಯಾಲಯದ ಪ್ರಾಂಶುಪಾಲರಾದ ಶ್ರೀ ಪುಷ್ಪರಾಜ್ ಬದಿಯಡ್ಕ, ಉಡುಪಿಯ ಶ್ರೀ ಸೀತಾರಾಮ ಶೆಟ್ಟಿಗಾರ್ ಮತ್ತು ಹರಿಪ್ರಸಾದ್ ಆವರು ಸಂಪನ್ಮೂಲ ವ್ಯಕ್ತಿಗಳಾಗಿ ವಿಶೇಷ ಉಪನ್ಯಾಸ ನೀಡಿದರು. ಉಡುಪಿ ಜಿಲ್ಲಾ ಪದವಿ ಪೂರ್ವ ಗಣಿತ ಉಪನ್ಯಾಸಕ ಸಂಘದ ಅಧ್ಯಕ್ಷರೂ ಪೆರ್ಡೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜಗದೀಶ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ವಿವೇಕ ಪದವಿ ಪೂರ್ವ ಕಾಲೇಜಿನ ಶ್ರೀಯುತ ಪ್ರಶಾಂತ್ ಭಟ್ ಸ್ವಾಗತಿಸಿ, ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಶ್ರೀಮತಿ ಸೌಮ್ಯಾ ಕಜೆಕಾರ್ ನಿರ್ವಹಿಸಿ, ಸರಕಾರಿ ಪದವಿಪೂರ್ವ ಕಾಲೇಜು, ಬಜೆಗೋಳಿಯ ಶ್ರೀ ಪ್ರವೀಣ್ ಕುಮಾರ್ ಧನ್ಯವಾದ ನೀಡಿದ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ನೂರಕ್ಕೂ ಮಿಕ್ಕಿ ಉಪನ್ಯಾಸಕರು ಭಾಗವಹಿಸಿದರು.
ಪ್ರತಿಭಾ ದಿನಾಚರಣೆ, ಪ್ರತಿಭಾ ಪುರಸ್ಕಾರ
ಉಡುಪಿಯ ವಿದ್ಯೋದಯ ಟ್ರಸ್ಟ್ (ರಿ.)ನ ಅಂಗಸಂಸ್ಥೆ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ ಜುಲೈ 12 ಮತ್ತು 13 ರಂದು ಪ್ರತಿಭಾ ದಿನಾಚಾರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸಂಯೋಜಿಸಲಾಯ್ತು. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎನ್. ನಾಗರಾಜ್ ಬಲ್ಲಾಳ್, ಕಾರ್ಯದರ್ಶಿ ಶ್ರೀ ಕೆ. ಗಣೇಶ್ ರಾವ್ ಇವರುಗಳು 2018-19ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ 6ನೇ ರ್‍ಯಾಂಕ್ ವಿಜೇತ ವಿದ್ಯಾರ್ಥಿನಿ ಖುಷಿ ಮತ್ತು 7ನೇ ರ್‍ಯಾಂಕ್ ವಿಜೇತ ವಿದ್ಯಾರ್ಥಿ ಅಭಿಷೇಕ್ ಎನ್. ಆಚಾರ್ಯ, ಮೊದಲಾದ ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು.
ಪ್ರಸಕ್ತ ಸಾಲಿನ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪ್ರಹಸನ, ಗಾಯನ, ನೃತ್ಯ, ಯಕ್ಷಗಾನ ನೃತ್ಯ, ಇತ್ಯಾದಿಗಳ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಉಪಪ್ರಾಂಶುಪಾಲೆ ಶ್ರೀಮತಿ ರಂಜನಾ ಕೆ., ಸಮಸ್ತ ಉಪನ್ಯಾಸಕ ವೃಂದದ ಸದಸ್ಯರುಗಳು ಮತ್ತು ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
Orientation Programme for Science Students
On 10th July 2019, Mrs. Kushalatha from Nitte University enlightened our students regarding various career options.
ಪ್ರಥಮ ಪಿಯುಸಿ ಪ್ರಾರಂಭೋತ್ಸವ : ಗುರಿ ಮತ್ತು ಗುರುವಿನ ಮಹತ್ವ ಅರಿಯಿರಿ
ಉಡುಪಿ: ನಿರಂತರ ಸಾಧನೆಯನ್ನೇ ಧ್ಯೇಯವನ್ನಾಗಿಸಿಕೊಂಡು ಯಶಸ್ವಿಯಾಗಿ ಮುನ್ನೆಡೆಯುತ್ತಿರುವ ಶೇಕಡಾ 100 ರ ಫಲಿತಾಂಶದೊಂದಿಗೆ ಸಾಂಸ್ಕೃತಿಕ-ಕ್ರೀಡಾ ಕ್ಷೇತ್ರಗಳಲ್ಲೂ ರಾಜ್ಯ-ರಾಷ್ಟ್ರ ಮಟ್ಟಗಳಲ್ಲಿ ಗುರುತಿಸಲ್ಪಡುತ್ತಿರುವ ಕರ್ನಾಟಕದ ಪ್ರತಿಷ್ಠಿತ ವಿದ್ಯಾಸಂಸ್ಥೆ ಉಡುಪಿಯ ವಿದ್ಯೋದಯ ಟ್ರಸ್ಟ್‌ನ ಅಂಗ ಸಂಸ್ಥೆ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ಪ್ರಥಮ ಪಿಯುಸಿಯ ಪ್ರಾರಂಭೋತ್ಸವವು 23 ಮೇ 2019 ರಂದು ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಹುಬ್ಬಳ್ಳಿಯ ಮೈ ಲೈಫ಼್ ಸಂಸ್ಥೆಯ ಸಿ.ಇ.ಒ. ಶ್ರೀ ಪ್ರವೀಣ್ ಗುಡಿಯವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮೇಲಿನಂತೆ ಹಿತವಚನ ನುಡಿಯುತ್ತಾ ಸಾಧನೆಯನ್ನೇ ಜೀವಾಳವನ್ನಾಗಿಸಿಕೊಳ್ಳಲು ಇವತ್ತಿನ ವಿದ್ಯಾರ್ಥಿ ಸಮೂಹಕ್ಕೆ ಅವಶ್ಯವೆನಿಸಿದ ಮಾನಸಿಕ ಸ್ಥಿರತೆ, ಏಕಾಗ್ರತೆ ಮತ್ತು ಸಮತೋಲನದ ಬದುಕನ್ನು ಕಂಡುಕೊಳ್ಳುವ ಬಗೆಯನ್ನು ವಿವರಿಸಿದರು.
ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀ ಕೆ. ಗಣೇಶ್ ರಾವ್ ಅವರು ಈ ಸಮಾರಂಭದ ಅಧ್ಯಕ್ಷರಾಗಿದ್ದು ಶಿಸ್ತು-ಸಂಯಮ-ಸಂಸ್ಕಾರಗಳು ವಿದ್ಯಾರ್ಥಿಯ ಕಲಿಕೆಯಲ್ಲಿ ಮಹತ್ತರ ಪಾತ್ರವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಸಂಸ್ಥೆಯ ಈ ಹಿಂದಿನ ವಿದ್ಯಾರ್ಥಿಗಳ ಸಾಧನೆಗಳ ಬಗ್ಗೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಎ.ಲಕ್ಷ್ಮೀನಾರಾಯಣ ಛಾತ್ರರು ಮೆಚ್ಚುಗೆಯ ಮಾತುಗಳನ್ನಾಡಿ ಈ ಸಾಲಿನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಉಪಪ್ರಾಂಶುಪಾಲೆ ಶ್ರೀಮತಿ ರಂಜನಾ ಕೆ. ವಿದ್ಯಾರ್ಥಿಗಳು ಅನುಸರಿಸಬೇಕಾದ ನಿಯಮಗಳ ಬಗ್ಗೆ ತಿಳಿಸಿದರು. ಆಡಳಿತ ಮಂಡಳಿಯ ಕೋಶಾಧಿಕಾರಿ ಶ್ರೀ ಪದ್ಮರಾಜ ಆಚಾರ್ಯರು ಶ್ರೀ ಪ್ರವೀಣ್ ಗುಡಿಯವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ವೇದಿಕೆಯಲ್ಲಿ ಎಲ್ಲಾ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಉಪನ್ಯಾಸಕರಾದ ಶ್ರೀ ಶಿವಪ್ರಸಾದ್ ಭಟ್ ಸ್ವಾಗತಿಸಿ, ಶ್ರೀಮತಿ ಅನುಪಮಾ ನಿರ್ವಹಿಸಿ ಮತ್ತು ಶ್ರೀ ನಾಗೇಂದ್ರ ಐತಾಳ್ ವಂದಿಸಿದರು.