top of page

ವಿದ್ಯೋದಯ ಪದವಿ ಪೂರ್ವ ಕಾಲೇಜು: ರಸಾಯನಶಾಸ್ತ್ರ ಪುನಶ್ಚೇತನ ಕಾರ್ಯಾಗಾರ

IMG_9899_1.jpg

ಉಡುಪಿ ವಿದ್ಯೋದಯ ಟ್ರಸ್ಟ್ (ರಿ)ನ ಅಂಗಸಂಸ್ಥೆ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಉಡುಪಿ ಜಿಲ್ಲಾ ಪ.ಪೂ. ಕಾಲೇಜುಗಳ ರಸಾಯನ ಶಾಸ್ತ್ರ ಉಪನ್ಯಾಸಕರ ವೇದಿಕೆಯ ಸಹಕಾರದೊಂದಿಗೆ 9 ಫೆಬ್ರವರಿ 2022 ರಂದು ಒಂದು ದಿನದ ಪುನಶ್ಚೇತನ ಕಾರ್ಯಾಗಾರ ನಡೆಯಿತು.

ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಪ.ಪೂ.ಶಿಕ್ಷಣ ಇಲಾಖೆಯ ಉಪನಿರ್ದೇಸಕರಾದ ಶ್ರೀ ಮಾರ್ತುತಿಯವರು ಈ ಶಿಬಿರದ ಮಹತ್ವದ ಕುರಿತು ಮತ್ತು ಇಲಾಖೆಯ ಆಶಯವನ್ನು ತಿಳಿಸಿದರು. ವಿದ್ಯೋದಯ ಪದವಿ ಪೂಃರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂದೀಪ್ ಕುಮಾರ್ ಶುಭ ಹಾರೈಸಿದರು. ಅಧ್ಯಕ್ಷರಾಗಿ ಪಳ್ಳಿ ಸರಕಾರಿ ಪಪೂ. ಕಾಲೇಜಿನ ಪ್ರಾಂಶುಪಾಲರೂ ರಸಾಯನ ಶಾಸ್ತ್ರ ವೇದಿಕೆಯ ಅಧ್ಯಕ್ಷರೂ ಆದ ಶ್ರೀ ವಸಂತ ಆಚಾರ್ ಪುನಶ್ಚೇತನ ಕಾರ್ಯಾಗಾರದ ಅನಿವಾರ್ಯತೆಯನ್ನು ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಸರಕಾರಿ ಪ.ಪೂ.ಕಾಲೇಜು ಭಟ್ಕಳದ ಹಿರಿಯ ರಸಾಯನಶಾಸ್ತ್ರ ಉಪನ್ಯಾಸಕರಾದ ಶ್ರೀ ಎಂ.ಕೆ. ನಾಯ್ಕ್ ಕ್ಲಿಷ್ಟಕರವಾದ ರಸಾಯನಶಾಸ್ತ್ರದ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವಂತೆ ಕಲಿಕಾ ವಿಧಾನಗಳನ್ನು ಪರಿಚಯಿಸಿದರು. ಕಾರ್ಯಾಗಾರದಲ್ಲಿ ವಾರ್ಷಿಕ ಪರೀಕ್ಷೆ ಮತ್ತು ಪ್ರಾಯೋಗಿಕ ಪರೀಕ್ಷೆಗಳ ಬಗ್ಗೆಯೂ ಚರ್ಚಿಸಲಾಯ್ತು.

ಮುಖ್ಯ ಅತಿಥಿಗಳಾದ ಜ್ಞಾನಗಂಗಾ ಪ.ಪೂ. ಕಾಲೇಜಿನ ಪ್ರಾಂಶುಪಾಲರೂ, ರಾಸಾಯನ ಶಾಸ್ತ್ರ ವೇದಿಕೆಯ ಗೌರವಾಧ್ಯಕ್ಷರೂ ಆಗಿರುವ ಶ್ರೀ ಯು.ಎಲ್. ಭಟ್, ಕರ್ನಾಟಕ ರಾಜ್ಯ ಪ.ಪೂ. ಕಾಲೇಜುಗಳ ರಸಾಯನಶಾಸ್ತ್ರ ಉಪನ್ಯಾಸಕರ ಸಂಘದ ಜಿಲ್ಲಾ ಪ್ರತಿನಿಧಿ ಶ್ರೀಮಂಜುನಾಥ ಭಟ್, ನಿವೃತ್ತ ಪ್ರಾಂಶುಪಾಲರೂ ರಸಾಯನಶಾಸ್ತ್ರ ಉಪನ್ಯಾಸಕರೂ ಆದ ಶ್ರೀ ರಮಾಕಾಂತ ರೇವಣಕರ್ ಉಪಸ್ಥಿತರಿದ್ದರು. ಉಪನ್ಯಾಸಕರಾದ ಯಶಾರಾಮಕೃಷ್ಣ ಪ್ರಾರ್ಥಿಸಿ, ವೇದಿಕೆಯ ಕಾರ್ಯದರ್ಶಿ ಶ್ರೀ ಹರಿಪ್ರಸಾದ ಸ್ವಾಗತಿಸಿ, ಶ್ರೀಮತಿ ವೀಣಾ ನಾಯಕ್ ವಂದಿಸಿದರು. ಶ್ರೀಮತಿ ರಂಜನಾ ಕೆ. ನಿರ್ವಹಿಸಿದರು.
 

bottom of page